Monday, December 31, 2007

"ಕಾಲಯ ತಸ್ಮಿ ನಮಃ "


ಸಹೃದಯರೇ ... ಮರೆಯಲಾಗದ ಅನೇಕ ಕ್ಷಣಗಳನ್ನ ನಮ್ಮ ಮಡಿಲಿಗೆ ತುಂಬಿ 2007 ತನ್ನ ಪಾಡಿಗೆ ತಾನು ಹೊರಟು ನಿಂತಿದೆ .. ಅದಕ್ಕೊಂದು ಸ್ನೇಹಪೂರ್ವಕ ಧನ್ಯವಾದ ಮತ್ತು ಭಾವಪೂರ್ಣ ವಿದಾಯ...ಕಾಲ ಚಕ್ರ ಮತ್ತೊಮ್ಮೆ ಉರುಳಿದೆ ...
ಅನುಭವದ ಗುಚ್ಚಕ್ಕೆ ಮತ್ತೊಂದು ಹೂವ ಸೇರಿಸಿದೆ...

ಎಷ್ಟೊಂದು ನೆನಪುಗಳ ಹಿಂದೆ ಸರಿಸಿದೆ...
ಇನ್ನಷ್ಟು ಕನಸುಗಳ ಬಿತ್ತಲು ಅಣಿಯಾಗಿದೆ...


ಒಂದು ವರುಷದ ಪಯಣದಲ್ಲಿ ಹಲವರ ಪರಿಚಯಿಸಿದೆ..
ಸ್ವಲ್ಪ ನೋವು-ಸ್ವಲ್ಪ ನಲಿವನ್ನು ತುಂಬಿ ಮನವ ಮುದಗೊಳಿಸಿದೆ..


ನೆಡೆದು ಬಂದ ದಾರಿಯಲ್ಲಿ ಅಡೆ-ತಡೆಗಳಾಗಿ ಎದುರಾಗಿದೆ...
ತನ್ಮೂಲಕ ಸಾಧನೆಯ ಪಾಠ ಕಲಿಸಿದೆ...


ಜ್ಯೋತೆಗೆಯೇ ಅವಳ ಬಟ್ಟಲು ಕಣ್ಣುಗಳ ನೆನಪಾಗಿಸಿದೆ...!
ಅವನ ತುಂಟ ನಗುವನ್ನು ಎದೆಯಾಳದಲ್ಲಿ ಮುದ್ರಿಸಿದೆ...!!


ಆತ್ಮೀಯರೇ, ಬರಲಿರುವ ಹೊಸ ವರ್ಷ
"ನಿಮ್ಮೆಲ್ಲ ಕನಸುಗಳಿಗೆ ಜೀವತುಂಬಲಿ" ಎಂದು
ನನ್ನ ಹೃದಯ ಈ ಮೂಲಕ ಹಾರೈಸಿದೆ.......

Thursday, December 27, 2007

ನಿಮಗೂ ಹೀಗೆ ಅನಿಸುತ್ತಾ?

ನಮ್ಮ ಬೆಂಗಳೂರೇ ಹೀಗಾ? ಯಾಕೋ ನನಗೆ, ಈ ನಡುವೆ ಇಲ್ಲಿ ನೆಡಿತಿರೋದೆಲ್ಲ ವಿಪರೀತ ಅನ್ನಿಸಲಿಕ್ಕೆ ಶುರು ಆಗ್ಬಿಟ್ಟಿದೆ...

ನಮ್ಮ ಮಹಾನಗರ ಪಾಲಿಕೆ ಬೃಹತ್ ಬೆಂಗಳೂರು ನಿರ್ಮಾಣದ ಹೆಸರಲ್ಲಿ ರಸ್ತೆ ದೊಡ್ಡದ ಮಾಡ್ತೀವಿ ಅಂತ, ಇರೋ ಮರಗಳನ್ನೆಲ್ಲ ಕಡಿದು ಬಿಸಾಕ್ತಿರೋದ್ರಿಂದ ಹಿಡಿದು.. M.G.Road ನಲ್ಲಿ ಈ ಸಲ new year party ಮಾಡೋಕಾಗೋಲ್ಲ...then "where's the party this time?" ಅಂತ ಬೇರೆ ಜಾಗ ಹುಡುಕ್ತಿರೋ ಪಡ್ಡೆ ಹೈದರ ತನಕ.... ಎಲ್ಲಾನು "ಅತಿ" ಅನ್ನಿಸೋ ಅಂತ ಬೆಳವಣಿಗೆಗಳು ...ಅನಿಸ್ತಿದೆ.

ಅರಣ್ಯ ಇಲಾಖೆಯ ನಿಯಮಗಳಿಗನುಸಾರ ಹೀಗೆ ಕಡಿಯೋ ಪ್ರತಿ ಮರದ ಬದಲಾಗಿ ೧೦ ಸಸಿಗಳನ್ನ ನೆಟ್ಟು ಪೋಷಣೆ ಮಾಡ್ಬೇಕು. ನಿಜವಾಗ್ಲು ನಮ್ಮ ಜನ ಆ ಕೆಲ್ಸ ಮಾಡ್ತಾರ? ಸಂಬಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸ್ತಾರ? ಸಾರ್ವಜನಿಕರಾಗಿ ನಮ್ಮ ಕರ್ತವ್ಯ ಏನು ಇಲ್ವಾ? ಅಥವಾ ಶ್ರೀ ಸಾಮಾನ್ಯರು ಈ ತರದ ವಿಷಯಗಳಲ್ಲಿ ಕೇವಲ ಅಸಹಾಯಕ ಪ್ರೇಕ್ಷಕರಾಗಿ ಉಳಿದುಬಿಡ್ತೀವ? ಹಮ್... ಹೀಗೆ ಯೋಚಿಸ್ತಾ ಹೋದ್ರೆ ಇಂತಹ ಎಷ್ಟೋ ವಿಷಯಗಳು... "ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?" ಅನ್ನೋ ಹಾಗೆ.. ಯಾರು ಯಾರನ್ನು ಪ್ರಶ್ನಿಸೋಕೆ ಹೋಗೋಲ್ಲ ....

" ಹೇಳೋರು ಯಾರು? ಕೇಳೋರು ಯಾರು?"

ಹಮ್... ವಿಷಯ ಎಲ್ಲಿಗೋ ಹೋಯ್ತು..

ಈಗ ಎಲ್ಲರಿಗೂ party mood. ಹೊಸ ವರ್ಷವನ್ನ ಸ್ವಾಗತಿಸೋ ಸಂಭ್ರಮ . ಇರಬೇಕಾದದ್ದೇ ಸಹಜ ...
ಆದ್ರೆ, ಅದರ ಹೆಸರಲ್ಲಿ ಕಂಠ ಪೂರ್ತಿ ಕುಡಿದು, ಆ ನಷೆಯಲ್ಲಿ ಜನ ಮಾಡಿಕೊಳ್ಳುವ ಅನಾಹುತಗಳು ಎಷ್ಟು ಸಮಂಜಸ? ಎಷ್ಟೋ ಸಲ ಅಂತ ಗೆಳೆಯ/ ಗೆಳತಿಯ ಸಾಥ್ ನಿಡ್ಲಿಕ್ಕೆ ಹೋದ ಅಮಾಯಕರು ಬಲಿಯಾದದ್ದುಂಟು... ಹೊಸವರ್ಷದ ಸೂರ್ಯ ರಶ್ಮಿ ಭೂಮಿಗೆ ಮುಟ್ಟುವ ಮೊದಲೇ, ಬದುಕಿ ಬಾಳಬೇಕಾಗಿರೋ ಜೀವಗಳು ಮಣ್ಣಾಗಿಹೊಗೋದು ಎಂತಹ ದುರಂತ ಅಲ್ವಾ?? ಎಷ್ಟು ಜನರಿಗೆ ಇದೆಲ್ಲ ಅರ್ಥ ಆಗತ್ತೆ??

ಮತ್ತದೇ ಪ್ರಶ್ನೆ ..." ಹೇಳೋರು ಯಾರು? ಕೇಳೋರು ಯಾರು?"