Tuesday, January 15, 2008

ಈ ನೆನಪುಗಳು ಚಲಿಗಾಲದಲ್ಲೇ ಯಾಕೆ ಕಾಡ್ತವೆ?



ಏನು ಚಳಿ ಈ ಬಾರಿ ನಮ್ಮ ಬೆಂಗಳೂರಲ್ಲಿ...ಅದರ ಜ್ಯೊತೆ ತುಂತುರು ಹನಿಯ ಪಕ್ಕ ವಾದ್ಯ ಬೇರೆ..ಕಳೆದ ವಾರ ಕೊರಿಯೋ ಚಳಿಯಲ್ಲಿ ೨ ಹನಿ ಮಳೆ ಬಂದು ಗುಲ್ಲೆಬ್ಬಿಸಿದಾಗ.. ಮನಸಿನಲ್ಲೂ ಅಂಥದ್ದೇ ತಲ್ಲಣ ...ಬೇಡ ಬೇಡ ಅಂದ್ರು ನೆನಪುಗಳು.... ಅಮ್ಮ ಮಾಡ್ಕೊಟ್ಟ ಬಿಸಿ ಬಿಸಿ ಕಾಫೀ ನ ನಿಧಾನ ವಾಗಿ ಗುಟುಕಿಸ್ತಾ ಕಿಟಿಕಿ ಇಂದ ಆಚೆ ಮಳೆ ಹನಿಗಳನ್ನ ಲೆಕ್ಕ ಮಾಡೋ ಹಾಗೆ ದಿಟ್ಟಿಸುತ್ತಾ ಕುತಾಗ .. ಎಲ್ಲೋ ಓದಿದ್ದ ಈ ಸಾಲುಗಳು ಅವನ(?) ನೆನಪನ್ನ ಜೀವಂತ ಮಾಡಿಬಿಟ್ಟವು....

"ಮಳೆರಾಯನಿತ್ತ ಮುತ್ತಿಗೆ ಮತ್ತೇರಿದೆ ಭೂಮಿಗೆ,
ಕಾದು-ಕಾದು ಕೆಂಪಾದ ಭೂಮಿ ತಂಪಾಯ್ತು ಇಂದು ,
ನೆನೆದು -ನೆನೆದು ಬೆಂದಿದೆ ಮನವು
ಭೇಟಿ ಇನ್ನೆಂದು ??"
ಹಮ್ .... ನಿಮಗೂ ಏನಾದ್ರೂ ..ಯಾರದ್ದಾದ್ರೂ ನೆನಪಾಯ್ತಾ ???