ಎಲ್ಲಿದ್ಯೋ ದೊರೆ?ಕೇಳಿಸ್ತಿದ್ಯಾ?
"Love is in the air" ... ನಾನು ಮಾತ್ರ ಅಲ್ಲಪ್ಪಾ... ಟಿವಿ ಚಾನೆಲ್ ಗಳ ಎಲ್ಲ anchor ಗಳು, FM ರೇಡಿಯೋ ಎಲ್ಲ RJ ಗಳು ಈ ತಿಂಗಳು ಶುರು ಆದಾಗ್ಲಿಂದಾ ಇದನ್ನೇ ಉಲಿತಾ ಇದಾರೆ..ಅದರ ಗಂಧ ಗಾಳಿ ನಿನಗೆ ಇನ್ನೂ ಮುಟ್ಟಿಲ್ವಾ??
"ಇದೆಲ್ಲ buisiness tricks... ನಮ್ಮ ಜನಗಳ ಕೊಳ್ಳುಬಾಕತನವನ್ನ ಬಳಸಿಕೊಳ್ಳಲು ಹುಟ್ಟುಹಾಕಿರೋ ಹೊಸ ರೂಪ ... apeing of western culture" ಅಂತ ಯಾರು ಎಷ್ಟೇ ಬೊಬ್ಬೆ ಹೊಡೆದ್ರು ಈ "Valentine's day" ಖದರ್ರೆ ಬೇರೆ ...ಇಡೀ ಬೆಂಗಳೂರು ನಾಡ ಹಬ್ಬಕ್ಕೆ ತಯಾರಿ ನೆಡೆಸಿರೋ ಹಾಗೆ ತಯಾರಿ ನಡೆಸಿದೆ ...ಎಲ್ಲಿ ನೋಡಿದ್ರು red roses, cards, gifts, teddy.... ಇವುಗಳ ಖರೀದಿಗೆ ಮುಗಿ ಬಿದ್ದಿರೋ ಮಿಡಿದ ಹೃದಯಗಳು....!!ನಿಜ ಹೇಳೋ ... ಇವರನ್ನೆಲ್ಲಾ ನೋಡಿದಾಗ ನಿನ್ನ ಮನಸಲ್ಲಿ ಕಚಗುಳಿಯ ಅನುಭವ ಆಗೊಲ್ವಾ? ಅದರ ಹಿಂದೇನೆ ನನ್ನ ನೆನಪಾಗೊಲ್ವಾ? ಪೂರ್ತಿ ಆರೂವರೆ ವರ್ಷದ ಪರಿಚಯ ನಮ್ಮದು..ಅದನ್ನ ಸ್ನೇಹ ಅನ್ನಬೇಕೋ.. ಪ್ರೇಮ ಅನ್ನಬೇಕೋ ಆರಾಧನೆ ಅನ್ನಬೇಕೋ . ಗೊತ್ತಿಲ್ಲ ... ಅದ್ರೆ ಬರಿ ಆಕರ್ಷಣೆ ಅಂತು ಅಲ್ಲ ... ನಿನ್ನ ಮಾತಿಗಿಂತ ನಿನ್ನ ಕಣ್ಣುಗಳಲ್ಲಿ ಅದು ಸ್ಪಷ್ಟವಾಗಿದೆ.... ಇಷ್ಟು ದಿನಗಳಲ್ಲಿ ನಿನಗಿಂತ ಹೆಚ್ಚಾಗಿ ನಿನ್ನ ಕಣ್ಣೆ ಮಾತಾಡಿವೆ...
ಅಬ್ಬ.. ಏನು ಮೋಡಿ ಇದ್ಯೋ ಆ ಕಣ್ಣುಗಳಲ್ಲಿ..? ಬೇರೆಯವರ ಜ್ಯೋತೆ ಗಂಟೆ ಗಟ್ಟಲೆ ವಾದ ಮಾಡಿ ಮನಿಸೋ ವಾಚಾಳಿ ನಾನು .. ಆದ್ರೆ ನಿನ್ನ ಆ ಕನ್ನೋಟದ ಜ್ಯೋತೆ ನನ್ನ ನೋಟ ಬೆರೆತಾಗ ಮಾತು ಮರೆತು ಹೋದಂತ ಅನುಭವ ನಂಗೆ.. ಅಲ್ವೋ ಹುಡುಗ phone ನಲ್ಲಿ ಅಷ್ಟೊಂದು ಹರಟೋ ನಾವು ಎದಿರುಬದಿರಾದಾಗ ಮಾತ್ರ ಪದಗಳಿಗೆ ತದಕಾಡ್ತಿವಲ್ಲ ಯಾಕೆ ಹೀಗೆ?ನಿನ್ನ ತುಟಿಯಂಚಿನ ನಗುವನ್ನ, ಆ ಚುರುಕು ನೋಟವನ್ನ ಮನಸಿನ ತುಂಬಾ ತುಂಬಿಕೊಳ್ಳುವ ಆಸೆನೋ.. ಅಥವ ಆ ನಿನ್ನ ನೋಟ ದಲ್ಲಿರೋ ತುಂಟ ಪ್ರಶ್ನೆಗಳಿಗೆ ಉತ್ತರಿಸಲಾಗದಷ್ಟು ನಾಚಿಕೆನೋ .. ಇವತ್ತಿನ ತನಕ ನನಗೆ ಅರ್ಥ ಆಗಿಲ್ಲ ... ಒಟ್ಟಿನಲ್ಲಿ ನಿನ್ನ ಧ್ವನಿ ಕೇಳಲಿಕ್ಕೆ ಏನೋ ಸಡಗರ... ನೀನು ಎದುರುಗೆ ಬಂದರಂತೂ Full full ಖುಷಿ... ಕುಣಿದಾಡೋ ಅಷ್ಟು,,,
ಮೊನ್ನೆ ದೇವಸ್ಥಾನದಲ್ಲಿ ನಿಮ್ಮಮ್ಮ ಎದುರಾದಾಗ ನನ್ನ ದೃಷ್ಟಿ ಮಾತ್ರ ಅವರ ಹಿಂದೆ ನಿನ್ನ ಹುಡುಕ್ತಾ ಇತ್ತು... , ಯಾರನ್ನ ಹುದುಕ್ತಿದ್ಯೇ ಹುಡುಗಿ ಅಂದಾಗ ಸುಮ್ಮನೆ ನಕ್ಕು ತಲೆ ತಗ್ಗಿಸಿದ್ದೆ.... ಅದ್ಯಾವ ಮಾಯದಲ್ಲಿ ಎಲ್ಲಿಂದಾ ಬಂದ್ಯೋ ಪುಣ್ಯಾತ್ಮ ?ಮಂಗಳಾರತಿ ತಗೊಂಡು ಎದುರಿಗೆ ನೋಡಿದ್ರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ದಿಯಾ...!!ಅಷ್ಟು ಜನರ ಮುಂದೆ ಯಾರಿಗೂ ಗೊತ್ತಾಗದ ಹಾಗೆ ಕಣ್ಣು ಮಿಟುಕಿಸಿ ಮಾಯ ಆದವನು ...ನವಗ್ರಹ ಪ್ರದಕ್ಷಣೆಗೆ ಹೇಗೆ ಜ್ಯೋತೆಯಾದೆ ??ಹಿಂದೆ ಹಿಂದೆ ಹೆಜ್ಜೆ ಇಟ್ಟು ಪ್ರದಕ್ಷಣೆ ಮಾಡೋವಾಗ ಬಗ್ಗಿ ನನ್ನ ಕಿವಿ ಹತ್ರ "ನನಗೋಸ್ಕರ ಹುಡುಕ್ತ ಇದ್ಯೇನೆ ಹುಡುಗಿ? ದೇವರೇ ಇವಳ ಎಲ್ಲ ಬೇಡಿಕೆಗಳನ್ನು ನೆರವೆರಿಸಪ್ಪ" ಅಂಥ ಪಿಸುಗುಟ್ಟಿದವನು , ಪ್ರದಕ್ಷಣೆ ಮುಗಿಸೋ ಹೊತ್ತಿಗೆ ಎಲ್ಲಿ ಮಾಯ ಆಗ್ಬಿಟ್ಟೆ?
ಇಲ್ಲಿ ಕೇಳೋ ಹುಡುಗ... 6 ವರ್ಷದಿಂದ ನನ್ನ ಹೀಗೆ ಕಾಡಿದ್ದು ಸಾಕು... ಈಗ ನಾನೇ ಕೆಳ್ತಿದ್ದೀನಿ... ಹೇಳು. .." ಇಷ್ಟು ದಿನಗಳಲ್ಲಿ ಒಮ್ಮೆನು ನಿನ್ನ ಮನಸು ನನಗೋಸ್ಕರ ಮಿಡಿದೆ ಇಲ್ವಾ? ಈ ಹುಡುಗಿ ನನ್ನ ಬಾಳ ಗೆಳತಿಯಾಗಿ ಸದಾ ಜ್ಯೋತೆಗಿರಲಿ ಅಂಥ ಅನ್ನಿಸಿಲ್ವಾ?" ಪ್ರೀತಿನ ವ್ಯಕ್ತ ಪಡಿಸ್ಲಿಕ್ಕೆ ಪ್ರೇಮಿಗಳ ದಿನವೇ ಆಗಬೇಕಿಲ್ಲ ... ಆದರೆ ನಮ್ಮ ಓರಿಗೆಯವರ ಸಂಭ್ರಮ ನೋಡಿ ಸಣ್ಣಗೆ ಹೊಟ್ಟೆ ಕಿಚ್ಚು ಪಟ್ಟು , ಈ ಸರಿನೂ ಈ ಹುಡುಗ ಏನು ಮಾತಾಡೋಹಾಗಿಲ್ಲ... ಅನ್ಕೊತಾ ಮುಖ ಸಪ್ಪಗೆ ಮಾಡ್ಕೊಂಡು ಕುತಿದ್ದಾಗಲೇ ಮೊನ್ನೆ ನಿನ್ನ phone ಬಂದದ್ದು ... "ಇಷ್ಟು ಬೇಗ ಆಫೀಸ್ ನಲ್ಲಿ ಕೆಲ್ಸ ಮುಗಿತಾ ಸರ್" ಅಂದಿದ್ದಕ್ಕೆ.. "ಇಲ್ವೆ ಹುಡುಗಿ... office ನಲ್ಲೆ ಇದೀನಿ... ಇದ್ದಕ್ಕಿದ್ದಂತೆ ಮಳೆ ಶುರುವಾಯ್ತು.. ಸುಮ್ಮನೆ ನನ್ನ cubicle ನಿಂದ ಹೊರಗೆ ಬಂದವನು ಕಿಟಕಿ ಆಚೆ ನೋಡಿದಾಗ ice cream parlour ಕಾಣಿಸ್ತಲ್ಲ ನಿನ್ನ ನೆನಪಾಯ್ತು ಕಣೆ... ಅದಕ್ಕೆ ಫೋನ್ ಮಾಡಿದ್ದು" ಅನ್ನೋ ವಿವರಣೆ ಬೇರೆ...
ಹೌದು ಕಣೋ... ಕಳೆದಸಲ ಹೀಗೆ ಇದ್ದಕ್ಕಿದಂಗೆ ಮಳೆ ಬಂದಾಗ ನಾವಿಬ್ರು ಜ್ಯೋತೆಗಿದ್ವಿ.."ಈ ಮಳೆಯಲ್ಲಿ ಬಜ್ಜಿ, ಬೋಂಡ, COFFEE .. ಎಲ್ರಿಗೂ ಬೇಕು ಅನ್ಸೋದೆ... ಅದ್ರೆ ಸುರ್ಯೋ ಮಳೆನಲ್ಲಿ ICE-CREAM ತಿನ್ನೋ ಮಜನೆ ಬೇರೆ ಕಣೋ... That's so romantic..." ಅಂತ ಹೇಳಿ, ಸುರಿಯೋ ಮಳೆನಲ್ಲೂ ಹಟ ಮಾಡಿ ನಿನ್ನ ಹತ್ರ ice cream ಕೊಡಿಸಿಕೊಂಡು ತಿಂದು.. ನಿನ್ನ ಉದ್ದ ಮುಗಿಗು ಚೂರು ಮೆತ್ತಿ ಬೈಸ್ಕೊಂಡಿದ್ದೆ ... ಹೇಗೆ ಮರಿಲಿ ಆ ಸಂಜೆನಾ?
ಮೊನ್ನೆ ಮಳೆಬಂದಾಗ "ಅಕಾಲದಲ್ಲಿ ಇದೆಂತಾ ಮಳೆ" ಅಂಥ ಎಲ್ಲರು ಗೊಣಗಿದ್ರೆ ನನ್ನ ಮನಸು ಮಾತ್ರ ನಿನ್ನ ನೆನೆದು ಒಳಗೆ ಖುಷಿ ಪಟ್ತಿತ್ತು... valentine's day ಕೆಂಪು -ತಂಪು ಬೆಂಗಳೂರಿನ pollution ಮಧ್ಯೆ ಕಳೆಗುಂದದಿರಲಿ ಅಂತ ಆ ದೇವರಿಗೂ ಅನಿಸ್ತೇನೋ ... ಅದಕ್ಕೆ ಮಳೆ ಸುರಿಸಿ ಪ್ರಕೃತಿನ ಸಿಂಗರ್ಸಿದ್ದಾನೆ... ನಮ್ಮ ಆಚರಣೆಗೆ ಅವನದ್ದು ಸಾಥ್ ಇದೆ...
ಈಗಲಾದ್ರು ಹೇಳೋ ನಾಳೆ ಸಿಗ್ತೀಯಾ? I promise... ನಂಗೆ red rose, chocolates, gifts, candle light dinner, teddy ಯಾವ್ದು ಬೇಡ.. ಕೊನೆಗೆ ice cream ಕೂಡ ಬೇಡ ಕಣೋ...!! 3 ದಿನದಿಂದ ಸಂಗೆ ಸೂರ್ಯಂಗೇ ವಿದಾಯ ಹೇಳಿಕ್ಕೆ ಅಂತಲೇ ಬರೋ ಹಾಗೆ 6 ಗಂಟೆಗೆ ಸರಿಯಾಗಿ ಮಳೆ ಶುರುಆಗ್ತಿದೆಯಲ್ಲ .. ಆ ತುಂತುರು ಮಳೆಯಲ್ಲಿ 10 ಹೆಜ್ಜೆ ಸುಮ್ಮನೆ ನಿನ್ನ ಜ್ಯೋತೆ ನೆಡೆದು ಹೋಗೋ ಆಸೆ ಕಣೋ... ನಿನ್ನ ಹೆಗಲ ಮೇಲೆ ತಲೆ ಇಟ್ಟು ಏನು ಮಾತಾಡದೆ ಸ್ವಲ್ಪ ಹೊತ್ತು ಹಾಗೆ ಕೂತಿರೋ ಅಸೆ ಕಣೋ..
Hey hero.. i understand, ನೀನು ತುಂಬಾ ಜವಬ್ದಾರಿಗಳಿರೋ ಹುಡ್ಗ.. ನನಗಿಂತ ಎರಡೇ ವರ್ಷ ದೊದ್ದವನಾದ್ರು, ಚಿಕ್ಕ ವಯಸ್ಸಿಗೆನೆ ಸಾಕಷ್ಟು ಜವಾಬ್ದಾರಿಗಳಿಗೆ ಹೆಗಲು ಕೊಟ್ಟು ನಡಿತಾ ಇದ್ಯಾ.. "ಮದ್ವೆ" ಮಾಡ್ಕೊಳ್ಳೋದು ಹಾಗಿರಲಿ, ಸುಮ್ಮನೆ "ನನ್ನ ಮದ್ವೆ" ಅಂತ ನೀನು ಯೋಚನೆ ಮಾಡ್ಲಿಕ್ಕು ಒಂದುವರೆ-ಎರಡು ವರ್ಷ ಬೇಕು ಅಂತ .ಆದ್ರೆ ನಾನು ಏನಪ್ಪಾ ಮಾಡ್ಲಿ ಈ ಮನಸ್ಸು ಕೇಳಬೇಕಲ್ಲ... ಬಿಡುವಿಲ್ಲದ ನಿನ್ನ software ಕೆಲಸದಲ್ಲಿ ನಿನಗಿರೋ ಉತ್ಸಾಹ , ಮನೆಯ ಅಷ್ಟೆಲ್ಲ ಜವಾಬ್ದಾರಿಗಳನ್ನ ಪ್ರೀತಿ ಇಂದ ನೀನು ನಿಭಾಯಿಸೋ ರೀತಿ, ಕಾರಣನೆ ಇಲ್ಲದೆ ನನ್ನನ್ನ ರೇಗಿಸಿ ಕಾಡೋವಾಗ ನಿನ್ನ ತುಟಿ ಅಂಚಿನಲ್ಲಿ ಹುಟ್ಟೋ ಆ ತುಂಟ ನಗು... ಇದನ್ನೆಲ್ಲ ನೋಡಿದಾಗ ನಿನ್ನ ಮೇಲಿನ ಪ್ರೀತಿ ನೂರ್ಮಡಿ ಆಗತ್ತೆ..ಹೃದಯ ನೀನೆ ಬೇಕು ಅಂತ ಹಟ ಮಾಡತ್ತೆ... and I fall in love with you all over again.... ಇದ್ರಲ್ಲಿ ನನ್ನ ತಪ್ಪೇನು ಹೇಳು? ಹುಡುಗ , ಸರ್ಯಾಗಿ ಕೆಳಿಸ್ಕೋ .. ನಿನ್ನೆಲ್ಲ ಜವಬ್ದಾರಿಗಳಿಗೆ ನಾನು ಕೂಡ ಹೆಗಲು ಕೊಟ್ಟು ನೆಡಿಲಿಕ್ಕೆ ತಯರಾಗಿದಿನಿ .. ಇಬ್ಬರು ಒಟ್ಟಿಗೆ ನಿಡಿತಾ ಒಂದೊಂದೇ ಜವಬ್ದಾರಿಗಳನ್ನ ಕಡಿಮೆ ಮಾಡ್ಕೊಳ್ಳೋಣ.. ಆಗ್ಲೇ ಹೇಳಿದ್ನಲ್ಲ "fall in love " ಅಂತ..ಅಲ್ಲಿ ಸಣ್ಣ correction ಕಣೋ... ಜೀವನದ ದಾರಿನಲ್ಲಿ ಒಟ್ಟಿಗೆ ನೆಡಿತ..ನೆಡಿತ we shall grow together in love.... ನೋಡು ನಾನು ನನ್ನ ಮನಸ್ಸಿನಲ್ಲಿರೋದನ್ನೆಲ್ಲ ಹೇಳಾಯ್ತು... ಒಂದೇ ಒಂದು ಸಲ ಮನಸ್ಸು ಬಿಚ್ಚಿ ಮಾತಾಡೋ... ನಿನ್ಗೊಸ್ಕರ ನೀ ಹೇಳೋ ವರೆಗೂ ಕಾಯಲಿಕ್ಕೆ ನಾನು ತಯಾರಿದಿನಿ...
ಕೇಳಿಸ್ತಾ ನಾನು ಹೇಳಿದ್ದೆಲ್ಲ?? ನಿನಗೆ ಅರ್ತ ಆಯ್ತೋ ಇಲ್ಲವೋ ಈ RJ ಗೆ ಆಯ್ತು ಅನ್ನಿಸುತ್ತೆ ...ನಮ್ಮಿಬ್ಬರ favourite song ಶುರು ಆಯ್ತು "ನಿನ್ನಿಂದಲೇ... ನಿನ್ನಿಂದಲೇ ..ಕನಸೊಂದು ಶುರುವಾಗಿದೆ" ಕನಸೇನೋ ಶುರುವಗಿದ್ಯೋ ಹುಡುಗ.. ನಿನ್ನ ಜ್ಯೋತೆ ಸೇರಿ ಅದಕ್ಕೆ ಬಣ್ಣ ತುಂಬಿ ನನಸು ಮಾಡಿಕೋ ಬೇಕು ಅನ್ನೋ ಆಸೆ ... ಹೇಳು ನಂಗೆ ಜ್ಯೋತೆ ಆಗ್ತಿಯಾ?
ಈಗ ಬೇಡ ನಾಳೆ ಸಿಕ್ಕಾಗ ಹೇಳು ... ಸಿಗಲಿಕ್ಕಾಗೋಲ್ಲ ಅಂದ್ರೆ ಒಂದು phone ಮಾಡೋ... ಕೊನೆ ಪಕ್ಷ ದಿನಾ ರಾತ್ರಿ ಮಾಡೋ ಹಾಗೆ ಕನಸಿಗಾದ್ರು ಬಾರೋ... .. ಅದ್ರೆ ನಿನ್ನ usual style ನಲ್ಲಿ ರೆಗಿಸ್ಬೇಡ ...
ಕಾಯ್ತಾ ಇರ್ತೀನಿ...