Monday, December 31, 2007

"ಕಾಲಯ ತಸ್ಮಿ ನಮಃ "


ಸಹೃದಯರೇ ... ಮರೆಯಲಾಗದ ಅನೇಕ ಕ್ಷಣಗಳನ್ನ ನಮ್ಮ ಮಡಿಲಿಗೆ ತುಂಬಿ 2007 ತನ್ನ ಪಾಡಿಗೆ ತಾನು ಹೊರಟು ನಿಂತಿದೆ .. ಅದಕ್ಕೊಂದು ಸ್ನೇಹಪೂರ್ವಕ ಧನ್ಯವಾದ ಮತ್ತು ಭಾವಪೂರ್ಣ ವಿದಾಯ...



ಕಾಲ ಚಕ್ರ ಮತ್ತೊಮ್ಮೆ ಉರುಳಿದೆ ...
ಅನುಭವದ ಗುಚ್ಚಕ್ಕೆ ಮತ್ತೊಂದು ಹೂವ ಸೇರಿಸಿದೆ...

ಎಷ್ಟೊಂದು ನೆನಪುಗಳ ಹಿಂದೆ ಸರಿಸಿದೆ...
ಇನ್ನಷ್ಟು ಕನಸುಗಳ ಬಿತ್ತಲು ಅಣಿಯಾಗಿದೆ...


ಒಂದು ವರುಷದ ಪಯಣದಲ್ಲಿ ಹಲವರ ಪರಿಚಯಿಸಿದೆ..
ಸ್ವಲ್ಪ ನೋವು-ಸ್ವಲ್ಪ ನಲಿವನ್ನು ತುಂಬಿ ಮನವ ಮುದಗೊಳಿಸಿದೆ..


ನೆಡೆದು ಬಂದ ದಾರಿಯಲ್ಲಿ ಅಡೆ-ತಡೆಗಳಾಗಿ ಎದುರಾಗಿದೆ...
ತನ್ಮೂಲಕ ಸಾಧನೆಯ ಪಾಠ ಕಲಿಸಿದೆ...


ಜ್ಯೋತೆಗೆಯೇ ಅವಳ ಬಟ್ಟಲು ಕಣ್ಣುಗಳ ನೆನಪಾಗಿಸಿದೆ...!
ಅವನ ತುಂಟ ನಗುವನ್ನು ಎದೆಯಾಳದಲ್ಲಿ ಮುದ್ರಿಸಿದೆ...!!


ಆತ್ಮೀಯರೇ, ಬರಲಿರುವ ಹೊಸ ವರ್ಷ
"ನಿಮ್ಮೆಲ್ಲ ಕನಸುಗಳಿಗೆ ಜೀವತುಂಬಲಿ" ಎಂದು
ನನ್ನ ಹೃದಯ ಈ ಮೂಲಕ ಹಾರೈಸಿದೆ.......

2 comments:

Marilyn said...

Keep up the good work. Have a great 2008! Cheers :-)

hrudaya said...

thank u marilyn..

wishing u a very successful new year;-)