Tuesday, January 27, 2009

ಹೀಗೆ ಸುಮ್ಮನೆ ... "ಅವನ " ನೆನಪಾದಾಗ .....ಅಯ್ಯೋ ಪಾಪಿ ...

ಸದಾ ನಿನ್ನದೇ ಧ್ಯಾನ ಕಣೆ" ಅಂತ ಹೇಳಿ ನನ್ನ ರೇಗಿಸ್ತಿದ್ದವನಿಗೆ ಮತ್ತೆ ನನ್ನ ನೆನಪಾಗೊಕ್ಕೆ ಒಂದು ಸುತ್ತು ಮಳೆ ಸುರೀಬೇಕಾಯ್ತು ಅಲ್ವಾ.....!!!

"Week end ನಲ್ಲಿ ಸಿಗಲ್ಲ ಕಣೆ .. ಕೆಲಸ ಇದೆ.., ಆದ್ರೆ ಬೇಗ ಬಂದ್ಬಿಡ್ತೀನಿ , ನಿನ್ನ ನೋಡದಲೇ 2 ದಿನ ಕಳ್ಯೋದೆ ಕಷ್ಟ " ಅಂದವನು 3 ತಿಂಗಳಿಂದ ಪತ್ತೆ ಇಲ್ಲ...!!ಮಳೆ ನೆಪದಲ್ಲದ್ರು ನನ್ನ ನೆನಪಾಯ್ತಲ್ಲ ...ಆ ಮಳೆಗೆ ....ಆ ತಂಗಾಳಿಗೆ ನನ್ನ ಕಷ್ಟ ನಿನಗಿಂತಾ ಬೇಗ ಅರ್ಥ ಆಯ್ತು ನೋಡು... !! ಹೀಗೆ ಸಿಕ್ಕವನ ಎದೆ ಮೇಲೆ ಗುದ್ದಿ -ಗುದ್ದಿ "ಯಾಕೋ ಹೀಗೆ ಮಾಡಿದೆ,, ಒಂದು call ಬೇಡ,, atleast ಒಂದು message ಕಳಿಸೋಕೆ ಆಗದೆ ಇರೋ ಅಷ್ಟು ಕೆಲಸನ ನಿಂಗೆ?" ಅಂತ ಕೇಳ್ಬೇಕು ಅಂತಾನೆ ಕೈ ಎತ್ತಿದ್ದು... ಆಗ್ಲಿಲ್ಲ ಕಣೋ.. ಅಷ್ಟರಲ್ಲಿ ನಿನ್ನ ಬೆಚ್ಚಗಿನ ಅಪ್ಪುಗೆಯಲ್ಲಿ ಸಿಕ್ಕಿಹಾಕೊಂಡಿದ್ದೆ..ಅಲ್ಲಿ ಉನ್ಮಾದ ಇರ್ಲಿಲ್ಲ.. ಭರವಸೆಯ ಆಸರೆ ಇತ್ತು…

ಅದ್ಯಾವ ಮಾಯದಲ್ಲಿ ತುಟಿಗಳು ಬೆರೆತು ಹೋದವೋ ಗೊತ್ತಾಗಲಿಲ್ಲ .. ನಿನ್ನ ಬೆಚ್ಚಗಿನ ಉಸಿರು ನನ್ನ ಕೆನ್ನೆ ತಟ್ಟಿದಾಗ ಮನಸ್ಸು ಮೆಲ್ಲಗೆ ಪಿಸುಗುಟ್ಟಿತ್ತು ” ಹುಡುಗಿ,ಇದೆ ಕಣೆ ಪ್ರಥಮ ಚುಂಬನ ” ಅಂತ… ನನ್ನ ಕಣ್ಣಲ್ಲಿದ್ದ ನೂರು ಪ್ರಶ್ನೆಗಳಿಗೆ ನೀನು ದೊಡ್ಡ ಭರವಸೆ ತುಂಬಿ ನಿನ್ನ ಆ ಮೊದಲ ಮುತ್ತಿನಲ್ಲಿ ಉತ್ತರ ಕೊಟ್ಟೆ .

ನನ್ನ ಗಲ್ಲ ಹಿಡಿದೆತ್ತಿ "ಹುಚ್ಚಿ .. ನಿನ್ನ ಬಿಟ್ಟು ನಾನು ಇರ್ತೀನೆನೆ ?" ಅಂದ್ಯಲ್ಲ .. ಅಷ್ಟೇ ಕಣೋ ... ನನ್ನ ಕೋಪ ಎಲ್ಲ ಇಳಿದ್ಹೂಯ್ತು ...ಖುಷಿಗೆ ಕಣ್ಣೀರು ಬಂದು ನಿನ್ನ ಎದೆ ತೇವ ಆಯ್ತು ...

ಬಿಡು.. ಅಷ್ಟಕ್ಕೆ ಮುಗಿದೇ , ಆ ಕಣ್ಣೀರು ನನ್ನ ತಲೆ ದಿಂಬನ್ನು ನೆನೆಸಿ ,,, ನನ್ನ ಕೆನ್ನೆ ಎಲ್ಲ ತಣ್ಣಗಾಗಿ ಎಚ್ಚರ ಆಗಿಹೋಯ್ತು ......!!! ತಕ್ಷಣ ಎದ್ದು ಕೂತೆ ..!! ಕಿಟಕಿ ಆಚೆ ಚಂದಿರ ನಗ್ತಾ .ಇದ್ದ . .. 3 ತಿಂಗಳಿಂದ ಅವನು ಇದನ್ನೇ ನೋಡ್ತಿದಾನೆ ... ಅವನೊಬ್ಬನೇ ನಿನ್ನ ಬಗ್ಗೆ ನಾ ಹೇಳೋ complaints ನೆಲ್ಲ ಶಾಂತವಾಗಿ ಕೆಲಿಸ್ಕೊಳೋದು ......!!! ಇಷ್ಟೇ ಸಾಕು ... ಇನ್ನು ಜಾಸ್ತಿ ನಿನ್ನ ಹತ್ರ ಮಾತಾಡೋದಿಲ್ಲ .........


ಬಾಕಿದೆಲ್ಲ ನಾಳೆ ಇದೆ ಚಂದ್ರ ನ ಹತ್ರ ಹೇಳಿ ಕಳಿಸ್ತೀನಿ ..ಕೇಳ್ಕೋ .............

ಈಗ್ಲಾದ್ರೂ ಹೇಳೋ .. ಯಾವತ್ತು ಬರ್ತೀಯ ....??????

ನಿನ್ನ ಹೆಜ್ಜೆ ಸದ್ದು ಕೆಳಿಸ್ಕೊಬೇಕು ಅಂತ ನನ್ನ ಕಿವಿಗಳು ಕಾಯ್ತಾ ಇದಾವೆ... ನಿನ್ನ ಸ್ವಾಗತಿಸೋಕೆ ಆ ಕಿವಿಗಳ ಒಡತಿ ಜ್ಯೋತೆ....

4 comments:

Anonymous said...

tumba chennagide...........
ultimate....

Anand RP

Sridhar Surya (Fitness Expert) said...

Its very heart touching, This will make us remember the one whom we missed in our life.

subrahmanya said...

Bhavane gala bagge jasthi artha vagada nanu, odi anisiddu "preethi andare heegooo erutha?????", estondu feelings galanna akshara roopadalli kattikoduva neevu nimma athmiyaranna adinnestu preethisuththeera????
i have a question.....: bhavane galillade preethi huttalu sadhya illave???? or preethisida nanthara bhavanegalannu huttisabahudallave????

Many thanks,
Subrahmanya Hegde
(if u wanna answer to above querry, pls do me a favour by sending your answer to below mentioned e-mail address:
hsubrahmanya@yahoo.com
or
subrahmanya87@gmail.com)

Bhavalahari said...

Dhanyavaadagalu Subrahmanya avare,

Preeti akaarana..adu ondu nirdishta kaaranadida athwa nirdishta bhavane inda hottodalla.. adre preeti inda hrudayadalli hutto bhavanegalidavalla avu maatra yaava padagaligu nilukalla..yaava tarkakku baddhavaagirodilla...

Naavu preetiso hrudaya nammanu ashte preetisabeku annodu sahaja hambala, aadre naanu ishta pattiddene anno karanakke aata/aake kuda nannanna preetisabeku anno apekhse, aata/aakeya manasinalli nanna bagge preetiya bhavaneyanna naanu huttisteeni anno prayatna tappagatteno., yaava nireekshegalannu ittukollade preeti kodalikke saadhya aadre, allige preetige ondu praudhime ( maturity)baratte alwaa?

Viparyasa andre yella preetisuva hrudayagaligu taanu preetiso vyaktiya hrudayadalli jaaga sigolla,Ashtara mattige preeti kathora!! ee maatanna buddhi saavara sala helidru adanna kivimele haakikollade matte ade vyaktiyatta vaaluva hrudayagale hecchu annodu innu dodda viparyaasa...
Ashtara mattige preeti dhanya..