Wednesday, October 1, 2008

Tunturu maleyalli ninnolumeya aasare.....

[ಸ್ನೇಹಿತರೆ .... ಸುಮಾರು ತಿಂಗಳುಗಳ ಹಿಂದೆ ಬರೆದ ಸಾಲುಗಳಿವು...
ಕನ್ನಡ ಲಿಪಿಯಲ್ಲಿ ಇಲ್ಲ... ಅದಕ್ಕಾಗಿ ವಿಶಾದಿಸುತ್ತ ನಿಮ್ಮ ಮುಂದೆ ಇಡ್ತಾ ಇದ್ದೀನಿ.. ಓದಿ ನಿಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ...]







Mareyuvantitte geleya
Andu surida maleyalli
Naavadida pisu maatugalu?
Nanna kannanchina preeti,
Ninna bharavaseya aasare,
Maleya parive illade jote jotege naavitta hejjegalu......

Nenapillave ninaga andina tunturu hanigalu?
Beretu hogiwe aa hanigalondige
Ee ”hrudaya veene”ya prati swaragalu...
Ninnolumeya “sparsha”dindale
Huttida prema naadakke
Hege kivudaadavu geleya ninna kivigalu?


Suriva maleyalli neenu maiyoddi nintire
Nannadaagive ill, toyda madhura anubhavagalu......
Ninna tutiyanchige muttittu
Jaarida hanigalinda, nannedeyalli moodive
Saavira saavira nenapina alegalu........

Che, maretiddare taane geleya
Kaaduvudu nenapugalu?
Yaavudanna mareyali? hege taane mareyali?
Mareyuvantahuve ninna premada kuruhugalu?
Suriva tunturu maleyalli, nadugutidda nannanu
Akkareinda balasi, bechhagina appuge yalli bandisi,
Mruduvaagi nanna haneya neenu chumbisidaaga
Ninna kannalidda nooru bhaavagalu....

Avu nanna jeevanada ati ramya kshanagalu.......

Kaadiruve geleya ninnanteye naanu
Mane maadive yede goodalli saavira bayakegalu......
Are galige dooraviddu, matte
Ondaagaliruva namma baala daarige,
Yendu musukadirali virahada modagalu.....
Mugiyada ee payanadalli sadaa jotegirali
Preeti chimmisuva tunturu Male hanigalu............

Photo curtesy from:www.dreamstime.com

8 comments:

Anonymous said...

"Karnagalu" anta helo badalu "kivigalu" anta heliddarene sumadhuravaagittu annodu nanna abhipraaya:-)

Bhavalahari said...

Dhanyavaadagalu Prasad...

Nimma salahe nanagu sari annistu...
aa salannu tiddi matte post maadteeni...:)

ಅಪ್ರಮೇಯ..... said...

ಚೆನ್ನಾಗಿದೆ ... ಹೀಗೆ ಮುಂದುವರಿಸಿ :)




ಹಾಗೆ ನಿಮ್ಮ ಬ್ಲಾಗ್ಗ್ ಲಿಂಕ್ ಅನ್ನು ಅನುಮತಿ ಇಲ್ಲದೆ ನನ್ನ ಬ್ಲಾಗ್ ನಲ್ಲಿ ಸೇರಿಸಿಕೊಂಡಿದ್ದಕ್ಕೆ....ಕ್ಷಮಿಸಿ :)

funmagics said...

ಮರೆಯುವನ್ತಿತ್ತೆ ಗೆಳೆಯ
ಅಂದು ಸುರಿದ ಮಳೆಯಲ್ಲಿ
ನಾವಾಡಿದ ಪಿಸು ಮಾತುಗಳು ?
ನನ್ನ ಕಣ್ಣಂಚಿನ ಪ್ರೀತಿ,
ನಿನ್ನ ಭರವಸೆಯ ಆಸರೆ,
ಮಳೆಯ ಪರಿವೆ ಇಲ್ಲದೆ ಜೊತೆ ಜೊತೆಗೆ ನಾವಿಟ್ಟ ಹೆಜ್ಜೆಗಳು......

ನೆನಪಿಲ್ಲವೇ ನಿನಗ ಅಂದಿನ ತುಂತುರು ಹನಿಗಳು?
ಬೆರೆತು ಹೋಗಿವೆ ಆ ಹನಿಗಳೊಂದಿಗೆ
ಈ ”ಹೃದಯ ವೀಣೆ”ಯಾ ಪ್ರತಿ ಸ್ವರಗಳು ...
ನಿನ್ನೊಲುಮೆಯ “ಸ್ಪರ್ಶ”ದಿಂದಲೇ
ಹುಟ್ಟಿದ ಪ್ರೇಮ ನಾದಕ್ಕೆ
ಹೇಗೆ ಕಿವುಡಾದವು ಗೆಳೆಯ ನಿನ್ನ ಕಿವಿಗಳು ?

ಸುರಿವ ಮಳೆಯಲ್ಲಿ ನೀನು ಮೈಯೊಡ್ಡಿ ನಿಂತಿರೆ
ನನ್ನದಾಗಿವೆ ಇಲ್ಲಿ, ತೊಯ್ದ ಮಧುರ ಅನುಭವಗಳು ......
ನಿನ್ನ ತುಟಿಯಂಚಿಗೆ ಮುತ್ತಿಟ್ಟು
ಜಾರಿದ ಹನಿಗಳಿಂದ, ನನ್ನೆದೆಯಲ್ಲಿ ಮೂಡಿವೆ
ಸಾವಿರ ಸಾವಿರ ನೆನಪಿನ ಅಲೆಗಳು........

ಛೆ, ಮರೆತಿದ್ದಾರೆ ತಾನೆ ಗೆಳೆಯ
ಕಾಡುವುದು ನೆನಪುಗಳು ?
ಯಾವುದನ್ನ ಮರೆಯಲಿ ? ಹೇಗೆ ತಾನೆ ಮರೆಯಲಿ?
ಮರೆಯುವನ್ತಹುವೆ ನಿನ್ನ ಪ್ರೇಮದ ಕುರುಹುಗಳು ?
ಸುರಿವ ತುಂತುರು ಮಳೆಯಲ್ಲಿ, ನಡುಗುತಿದ್ದ ನನ್ನನು
ಅಕ್ಕರೆಯಿಂದ ಬಳಸಿ, ಬೆಚ್ಚಗಿನ ಅಪ್ಪುಗೆ ಯಲ್ಲಿ ಬಂದಿಸಿ ,
ಮೃದುವಾಗಿ ನನ್ನ ಹಣೆಯ ನೀನು ಚುಂಬಿಸಿದಾಗ
ನಿನ್ನ ಕಣ್ಣಲಿದ್ದ ನೂರು ಭಾವಗಳು....

ಅವು ನನ್ನ ಜೀವನದ ಅತಿ ರಮ್ಯ ಕ್ಷಣಗಳು.......

ಕಾದಿರುವೆ ಗೆಳೆಯ ನಿನ್ನಂತೆಯೇ ನಾನು
ಮನೆ ಮಾಡಿವೆ ಎದೆ ಗೂಡಲ್ಲಿ ಸಾವಿರ ಬಯಕೆಗಳು ......
ಅರೆ ಗಳಿಗೆ ದೂರವಿದ್ದು, ಮತ್ತೆ
ಒಂದಾಗಲಿರುವ ನಮ್ಮ ಬಾಳ ದಾರಿಗೆ,
ಎಂದು ಮುಸುಕದಿರಲಿ ವಿರಹದ ಮೋಡಗಳು.....
ಮುಗಿಯದ ಈ ಪಯಣದಲ್ಲಿ ಸದಾ ಜೊತೆಗಿರಲಿ
ಪ್ರೀತಿ ಚಿಮ್ಮಿಸುವ ತುಂತುರು ಮಳೆ ಹನಿಗಳು............

Bhavalahari said...

@ Funmagics..

ನೀವು ಯಾರು ಅಂತ ತಿಳಿಸಿದ್ರೆ ಇನ್ನು ಖುಷಿ ಆಗ್ತಿತ್ತು.... ನಿಮ್ಮ ಅಮೂಲ್ಯ ಸಮಯವನ್ನ ವಿನಿಯೋಗಿಸಿ ನನ್ನ ಸಾಲುಗಳಿಗೆ ಕನ್ನಡ ಲಿಪಿಯ ಒಡವೆ ತೊಡಿಸಿ ಕಳಿಸಿದ್ದಕ್ಕ ಹೃತ್ಪೂರ್ವಕ ವಂದನೆಗಳು...
ಶುಭಹಾರೈಕೆಗಳೊಂದಿಗೆ,
ಭಾವಲಹರಿ.

funmagics said...

ಕೆರೆಯ ನೀರನು ಕೆರೆಗೆ ಚೆಲ್ಲೇ ವರವ ಪಡೆದವ....
ನನ್ನ ಶ್ರಮ ಇಲ್ಲವೇ ಇಲ್ಲ...
ಶ್ರಮ ವಿಲ್ಲದೆ ಹೆಸರು ಮಾಡುವ ಅಭಿಲಾಷೆ ನನಗಿಲ್ಲ
ಅದರಿಂದ ಹೆಸರೂ ಇಲ್ಲ

Bhavalahari said...

@ funmagics

"ನನ್ನ ಶ್ರಮ ಏನು ಇಲ್ಲ" ಅಂತ ಬಹಳ ಸರಳವಾಗಿ ಹೇಳಿದೀರಿ.. ನಿಮ್ಮ ಸದ್ಗುಣ ಅನುಕರಣೀಯ...
ಈ ಸದ್ಭಾವನೆಯ ರೂಪದಲ್ಲೇ ನಿಮ್ಮ ಗುರುತು ಇದೆ... "ಹೆಸರು" ಮುಖ್ಯ ಅಲ್ಲ ಬಿಡಿ... ಸದಾಶಯ , ಸದಭಿರುಚಿಗಳ ವಿನಿಮಯಕ್ಕೆ ಹೆಸರು, ಭಾಷೆಗಳ ಕಟ್ಟುಪಾಡು ಇರೋದಿಲ್ಲ ಅಲ್ಲವೆ?
ನಿಮ್ಮ ಸಮಯ ಅಮೂಲ್ಯವಾದದ್ದು.. ಅದಕ್ಕೆ ನನ್ನ ವಂದನೆಗಳು...

ಮತ್ತೆ ಸಮಯ ಸಿಕ್ಕಾಗ "ಭಾವಚಿತ್ತರ" ದ ಕಿಟಕಿಯಲ್ಲಿ ಒಮ್ಮೆ ಇಣುಕಿ ,ನಿಮ್ಮ ಸಲಹೆ , ಅಭಿಪ್ರಾಯಗಳನ್ನ ಸೂಚಿಸಿ...

ಶುಭಹಾರೈಕೆಗಳೊಂದಿಗೆ,
ಭಾವಲಹರಿ

ಮನಸ್ವಿ said...

ಕಷ್ಟ ಪಟ್ಟು ಆಂಗ್ಲ ಭಾಷೆಯ ಲಿಪಿಯಲ್ಲಿ ಓದುವ ಬದಲು ಮುಂಚೆಯೇ... ಕಮೆಂಟ್ ನೋಡಲು ಬರಬೇಕಿತ್ತು ಅನಿಸಿದ್ದು ನಿಜ. ತುಂಬಾ ಚನ್ನಾಗಿ ಬರೆದಿದ್ದೀರಿ.. ನನ್ನದೊಂದು ಪುಟ್ಟ ಸಲಹೆ.. ಯಾಕೆ ನೀವು ಆಂಗ್ಲ ಲಿಪಿಯಲ್ಲಿರುವ ಸಾಲುಗಳನ್ನು ತೆಗೆದು ಕನ್ನಡ ಲಿಪಿಯನ್ನು ಹಾಕಬಾರದು??
funmagics ಗೆಳೆಯರೊಬ್ಬರು ಕನ್ನಡ ಲಿಪಿಗೆ ಭಾಷಾಂತರಗೊಳಿಸಿದ್ದಾರಲ್ಲ... ಕಾಪಿ ಪೇಶ್ಟ್ ಮಾಡಿದರೆ ಆಯಿತು. ಕನ್ನಡದ ಸಾಲುಗಳು ಕನ್ನಡದಲ್ಲಿದ್ದರೆ ಮತ್ತಷ್ಟು ಚಂದವಲ್ಲವಾ...
ಬರೆಯುತ್ತಿರಿ.. ಕನ್ನಡದಲ್ಲಿ.